
27th June 2025
ನಮ್ಮ ನ್ಯೂಜ್ ಕುಷ್ಟಗಿ : ಮಾದಿಗ ಸಮುದಾಯದ ಕುಮಾರಿ ಸಂಜನಾ ಇವರು MBBS ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3800 Rank ಗಳಿಸಿ ಉತ್ತಮ ಸಾಧನೆ ಮಾಡಿದ್ದಕ್ಕೆ ಹಾಗೂ ಕುಮಾರ ಪ್ರಪುಲ್ ಹೊಸಮನಿ NEET ಪರೀಕ್ಷೆಯಲ್ಲಿ 2613 Rank ಗಳಿಸಿದ್ದಕ್ಕೆ ಗುರುವಾರದಂದು ಕುಷ್ಟಗಿ ನಗರದ ವಾಲ್ಮೀಕಿ ಭವನದಲ್ಲಿ ತಾಲೂಕಿನ ಮಾದಿಗ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮಾದಿಗ ಸಮುದಾಯದ ನೌಕರರಾದ ಶಶಿಕಾಂತ ಶಾಖಾಪೂರ ಶಿಕ್ಷಣ ಇಲಾಖೆ ದೋಟೀಹಾಳ ಇವರ ಸಹೋದರನ ಮಗಳಾದ ಕುಮಾರಿ ಸಂಜನಾ ಇವರು MBBS ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3800 Rank
ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಹಾಗೂ ಶ್ರೀಯುತ ದಂಡಪ್ಪ ಹೊಸಮನಿ CRP ಶಿಕ್ಷಣ ಇಲಾಖೆ ಇವರ ಪುತ್ರ ಪ್ರಪುಲ್ ದಂಡಪ್ಪ ಹೊಸಮನಿ NEET ಪರೀಕ್ಷೆಯಲ್ಲಿ 2613 Rank ಗಳಿಸಿದ್ದಾರೆ.
ಮಾದಿಗ ಸಮುದಾಯದ ಎಲ್ಲಾ ನೌಕರರು ಸೇರಿ ದಿನಾಂಕ 26-6-2025 ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಇದೇ ವೇಳೆ ಕುಮಾರಿ ಸಂಜನಾ ಹಾಗೂ ಕುಮಾರ ಪ್ರಪುಲ್ ಇರ್ವರಿಗೆ ಅಭಿನಂದನೆ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಾಷಯಗಳನ್ನು ತಿಳಿಸಲಾಯಿತು.
ಕೋರಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಲಕ್ಷ್ಮಣ್ ಸರ್, ಕಾರ್ಯದರ್ಶಿ ಮಹಾಂತೇಶ ಜಾಲಿಗಿಡದ, ಖಜಾಂಚಿ ವಿಜಯಕುಮಾರ್ ಮೈತ್ರಿ, ಸಂಘಟನಾ ಕಾರ್ಯದರ್ಶಿ ಮಹೇಂದ್ರ ಹೋಸಮನಿ, ವಿಠಲ್ ಎಮ್, ಮಾರ್ಗದರ್ಶಕರು, ದಂಡಪ್ಪ ಸರ್ ಹಾಗೂ ಮಾದಿಗ ಸಮಾಜದ ವಕೀಲರಾದ ಶಿವಕುಮಾರ ದೊಡ್ಡಮನಿ, ಸುಖಮುನಿ ಗುಮಗೇರ ಹಾಗೂ ಚಿದಾನಂದ ಇಂಡಿ, ಧರ್ಮರಾಜ, ದೊಡ್ಡಮನಿ, ಬುಡ್ಡಪ್ಪ ದೋಟಿಹಾಳ, ಮಂಜುನಾಥ ಹೊಸಮನಿ, ಶ್ರೀಕಾಂತ್ ಕೆಂಗಾರಿ, ಪರಶುರಾಮ ಸರ್, ಲಕ್ಷ್ಮಣ್ ಸರ್ ಸೇರಿದಂತೆ ಇತರರಿದ್ದರು.
ಮಾದಿಗ ಸಮುದಾಯದ ಕುಮಾರಿ ಸಂಜನಾ ಇವರು MBBS ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3800 Rank ಗಳಿಸಿ ಉತ್ತಮ ಸಾಧನೆ ಮಾಡಿದ್ದಕ್ಕೆ ಹಾಗೂ ಕುಮಾರ ಪ್ರಪುಲ್ ಹೊಸಮನಿ NEET ಪರೀಕ್ಷೆಯಲ್ಲಿ 2613 Rank ಗಳಿಸಿದ್ದಕ್ಕೆ ಗುರುವಾರದಂದು ಕುಷ್ಟಗಿ ನಗರದ ವಾಲ್ಮೀಕಿ ಭವನದಲ್ಲಿ ತಾಲೂಕಿನ ಮಾದಿಗ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
*‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ* *ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ*
ಕೆಎಂಎಫ್ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧ ಆಯ್ಕೆ